ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ಯಕ್ಷಗಾನ ತ್ರೀವೇಣಿ ಸಂಗಮ: ಪೇಜಾವರ ಶ್ರೀ

ಲೇಖಕರು : ವಿಜಯ ಕರ್ನಾಟಕ
ಭಾನುವಾರ, ನವ೦ಬರ್ 8 , 2015
ನವ೦ಬರ್ 8, 2015

ಯಕ್ಷಗಾನ ತ್ರೀವೇಣಿ ಸಂಗಮ: ಪೇಜಾವರ ಶ್ರೀ

ಸುಳ್ಯ : ಯಕ್ಷಗಾನ ತ್ರೀವೇಣಿ ಸಂಗಮ. ಈ ಕಾರ್ಯಕ್ರಮ ಯಕ್ಷಗಾನ ಕಲಾವಿದರ ಸಮ್ಮಿಲನ. ಯಕ್ಷಗಾನ ಕರಾವಳಿ ಮಣ್ಣಿನ ಕಲೆ. ಇದು ಶಿಸ್ತಿನ ಕಲೆ. ಕಲೆ ಮತ್ತು ಭಾಷೆಯನ್ನು ಇಂದಿನ ಜನಾಂಗ ಪ್ರೀತಿಸಬೇಕು. ಯಕ್ಷಗಾನದಂತಹ ಶ್ರೀಮಂತ ಕಲೆಗೆ ವಿಶೇಷ ಮಾನ್ಯತೆ ನೀಡಬೇಕು. ಅಂದು ಶ್ರೀಕೃಷ್ಣ ಗೋವರ್ಧನ ಬೆಟ್ಟವನ್ನು ಎತ್ತಿ ಹಿಡಿದಿದ್ದಾನೆ. ಇಂದು ಕಲಾ ಪೋಷಕರು ಯಕ್ಷಗಾನ ಕಲೆಯನ್ನು ಎತ್ತಿ ಹಿಡಿದಿದ್ದಾರೆ ಎಂದು ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.

ಸುಳ್ಯ ಸಂಪಾಜೆಯ ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನದ ಆಶ್ರಯದಲ್ಲಿ ನಡೆಯುತ್ತಿರುವ ಸಂಪಾಜೆ ಯಕ್ಷೋತ್ಸವದ ರಜತ ಸಂಭ್ರಮದ ಪ್ರಯುಕ್ತ ಶನಿವಾರ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಎಡನೀರು ಮಠದ ಕೇಶವಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿದರು. ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಆಶಿರ್ವಚನ ನೀಡಿ, ಕರಾವಳಿಯ ಯಕ್ಷಗಾನ ಕಲೆ ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಬೇಕಾದರೆ ಕಲಾ ಪೋಷಕರೇ ಕಾರಣ ಎಂದರು.

ಪರಕ್ಕಜೆ ಗಣಪತಿ ಭಟ್ಟರ ಅಭಿನಂದನಾ ಗ್ರಂಥ, ಯಕ್ಷಗಾನದ ಸವ್ಯಸಾಚಿ ಕೆ. ಗೋವಿಂದ ಭಟ್ಟರ ಅಭಿನಂದನಾ ಗ್ರಂಥ, ವಿದ್ವಾನ್ ಹಿರಣ್ಯ ವೆಂಕಟೇಶ್ವರ ಭಟ್ಟ ವಿರಚಿತ ಋಷಿ ಪರಂಪರೆ ಗ್ರಂಥ ಮತ್ತು ರವಿಶಂಕರ ವಳಕುಂಜ ವಿರಚಿತ ಯಕ್ಷಪಾತ್ರ ದೀಪಿಕಾ ಪುಸ್ತಕ ಬಿಡುಗಡೆಗೊಳಿಸಲಾಯಿತು.

ವೇಮೂ ಹಿರಣ್ಯ ವೆಂಕಟೇಶ ಭಟ್ ಸ್ವಾಗತಿಸಿದರು. ವಾಸುದೇವ ರಂಗಾ ಭಟ್ ಕಾರ್ಯಕ್ರಮ ನಿರೂಪಿಸಿದರು. ಸರವು ರಾಮ ಭಟ್, ಯಕ್ಷಗಾನ ಕಲಾವಿದ ಕೆ. ಗೋವಿಂದ ಭಟ್, ಕಲಾ ಪೋಷಕ ಟಿ. ಶ್ಯಾಮ್ ಭಟ್, ಕೀಲಾರು ಪ್ರತಿಷ್ಠಾನದ ಉಪಾಧ್ಯಕ್ಷ ಕೀಲಾರು ರಾಜಾರಾಮ, ಕಾರ್ಯದರ್ಶಿ ಸುಮನಾ ಶ್ಯಾಂ ಭಟ್, ಪರಕಜೆ ಗಣಪತಿ ಭಟ್ ಉಪಸ್ಥಿತರಿದ್ದರು. ಬಳಿಕ ಸಂಪಾಜೆಯ ಕಲ್ಲುಗುಂಡಿ ಶಾಲಾ ವಠಾರದಲ್ಲಿ ಮೂರು ರಂಗಸ್ಥಳಗಳಲ್ಲಿ ಏಕಕಾಲಕ್ಕೆ ಶ್ರೀದೇವಿ ಮಹಾತ್ಮೆ ಸ್ಪರ್ಧೆಯ ಮೂರಾಟ ಪ್ರದರ್ಶನ ನಡೆಯಿತು.

ಯಕ್ಷಗಾನ ಪ್ರದರ್ಶನದಲ್ಲಿ 12 ಮಂದಿ ಭಾಗವತರು, 12 ಮಂದಿ ಮದ್ದಳೆಗಾರರು, 12 ಮಂದಿ ಚೆಂಡೆ ವಾದಕರು, 9 ಮಂದಿ ಚಕ್ರತಾಳದಲ್ಲಿ ಸಹಕರಿಸಿದರು. ಮೂರು ತಂಡಗಳಲ್ಲಿ ಹಿರಿಯ, ಕಿರಿಯ ಸಹಿತ ಒಟ್ಟು 100 ಮಂದಿ ಕಲಾವಿದರು ಪ್ರಸಂಗ ಪ್ರದರ್ಶಿಸಿದರು.

ಕೃಪೆ : vijaykarnataka

Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ